RJ Thrishool Gowda

RJ Thrishool Gowda

@rjthrishool · 12K subscribers · 34 videos · English

I’m Thrishool Gowda, popularly known as RJ Thrishool — storyteller and former Prime Time Radio Jockey at Radio City 91.1 FM Bengaluru and 93.5 RED FM Mangalu…

Episodes

7:14

ಅಮೇರಿಕಾ ಬಚ್ಚಿಟ್ಟ ಅತೀ ದೊಡ್ಡ ರಹಸ್ಯ⁉️: Area 51 Aliens & UFOs? 👽🛸 | ಮುಗಿಯದ ಕಥೆಗಳು

33K views · 3d ago · 7:14

ಅಮೆರಿಕದ ನೆವಾಡಾ ಮರುಭೂಮಿಯಲ್ಲಿರುವ 'ಏರಿಯಾ 51' (Area 51) ಜಗತ್ತಿನ ಅತಿ ದೊಡ್ಡ ರಹಸ್ಯಗಳಲ್ಲಿ ಒಂದು. ಆ ಬೇಲಿಯ ಆಚೆಗೆ ನಡೆಯುತ್ತಿರುವುದಾದರೂ ಏನು? 1947ರ ರೋಸ್‌ವೆಲ್ ದುರಂತದಲ್ಲಿ ಸಿಕ್ಕಿದ ಆ 'ಮೆಮೊರಿ ಮೆಟಲ್' ಎಲ್ಲಿದೆ? ಬಾಬ್ ಲಾಜರ್ ಹೇಳಿದ ಏಲಿಯನ್ ಸ್ಪೇಸ್‌ಕ್ರಾಫ್ಟ್ ಕಥೆ ನಿಜವಾ? 2019ರ 'ಸ್ಟಾರ್ಮ್ ಏರಿಯಾ 51' ಅಭಿಯಾನದ ಹಿಂದಿನ ಅಸಲಿ ಕಥೆ ಏನು?

6:26

ಮೈಸೂರು ಅರಸರಿಗೆ ಮಕ್ಕಳಾಗದಿರಲು ಕಾರಣವಾದ ಆ ಘಟನೆ! | The Story of Alamelamma | ಮುಗಿಯದ ಕಥೆಗಳು

17K views · 2w ago · 6:26

ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ... 400 ವರ್ಷಗಳಿಂದ ಮೈಸೂರು ಅರಸರನ್ನು ಕಾಡುತ್ತಿರುವ ಈ ಶಾಪದ ಹಿಂದಿನ ಅಸಲಿ ಕಥೆ ಏನು? ವಿಜ್ಞಾನ ಇದನ್ನು ಭೂಗರ್ಭಶಾಸ್ತ್ರದ ವಿಸ್ಮಯ ಎನ್ನುತ್ತದೆ, ಆದರೆ ಇತಿಹಾಸ ಒಂದು ಅಸಹಾಯಕ ಹೆಣ್ಣಿನ ಕಣ್ಣೀರಿನ ಕಥೆಯನ್ನು ಹೇಳುತ್ತದೆ. 1610 ರಲ್ಲಿ ಕಾವೇರಿ ನದಿಯ ದಡದಲ್ಲಿ ನಡೆದ ಆ ಒಂದು ಭೀಕರ ಘಟನೆ ಇಡೀ ರಾಜಮನೆತನದ ಭವಿಷ್ಯವನ್ನೇ ಬದಲಾಯಿಸಿತು.

10:52

ಮೈಸೂರು ಹುಲಿ ಎಂದು ಕರೆಸಿಕೊಳ್ಳುವ ಟಿಪ್ಪು, ಕೊಡಗಿನ ಪಾಲಿಗೆ ನಿಜವಾದ ವಿಲನ್!? | ಮುಗಿಯದ ಕಥೆಗಳು

4.1K views · 1mo ago · 10:52

ದೇವಾಟ್ ‌ಪರಂಬುನಲ್ಲಿ ಸುಮಾರು 250 ವರ್ಷಗಳ ಹಿಂದೆ ನಡೆದ ಆ ಕರಾಳ ಇತಿಹಾಸದ ಸತ್ಯವೇನು? ಅದು ಕೇವಲ ಗಾಳಿಮಾತೇ ಅಥವಾ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಅತಿದೊಡ್ಡ ನಂಬಿಕೆ ದ್ರೋಹವೇ? ಮೀರ್ ಕಿರ್ಮಾನಿಯವರ 'ನಿಶಾನ್-ಎ-ಹೈದರಿ', ಕರ್ನಲ್ ಮಾರ್ಕ್ ವಿಲ್ಕ್ಸ್ ಅವರ 'ಹಿಸ್ಟರಿ ಆಫ್ ಮೈಸೂರು', 1870ರ 'ಕೊಡಗು ಗೆಜೆಟಿಯರ್' ದಾಖಲೆಗಳು, ಹಿಂದಿನ ಮಾಧ್ಯಮ ವರದಿಗಳು (ಮಾಜಿ ಸಂಸದರ ಸಂದರ್ಶನ) ಮತ್ತು ಜನರ ಮೌಖಿಕ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಮಾಡಿದ ವಿಶೇಷ 'ಕೇಸ್ ಸ್ಟಡಿ' ವಿಡಿಯೋ ಇದು.

5:42

7 ಜೀವಗಳನ್ನು ಬಲಿಪಡೆದ ತಣ್ಣೀರುಬಾವಿ ಬೀಚ್‌ನ ಆ ಹಡಗು ದುರಂತ! | True Story of MV DenDen

5.5K views · 1mo ago · 5:42

ಜೂನ್ 23, 2007. ಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ನಡೆದ ಎರಿಟ್ರಿಯಾ ದೇಶದ ಬೃಹತ್ ಕಾರ್ಗೋ ಹಡಗು 'MV DenDen' ದುರಂತದ ನೈಜ ಕಥೆ. ಕಪ್ತಾನನ ಅಹಂಕಾರ 7 ಜೀವಗಳನ್ನು ಬಲಿಪಡೆದರೆ, ಮಂಗಳೂರಿನ ಮೀನುಗಾರರ ಸಾಹಸ 17 ಜೀವಗಳನ್ನು ಉಳಿಸಿತ್ತು! In this deep-dive regional documentary, we uncover the forgotten maritime disaster of the MV DenDen. Caught in a brutal monsoon storm off the coast of Mangalore, this massive cargo ship drifted helplessly until it crashed into the sandbars of Tannirbhavi beach.

6:29

ಕಣ್ಣೆದುರೇ ಟೈಟಾನಿಕ್ ಮುಳುಗುತ್ತಿದ್ದರೂ ಆ ಹಡಗು ಸುಮ್ಮನಿದ್ದಿದ್ದೇಕೆ? | The Dark Truth of Titanic

6.7K views · 1mo ago · 6:29

ಟೈಟಾನಿಕ್ ಸಮುದ್ರದಲ್ಲಿ ಮುಳುಗುವಾಗ, ಸಾವಿರಾರು ಜೀವಗಳು ಕತ್ತಲಲ್ಲಿ ಸಹಾಯಕ್ಕಾಗಿ ಚೀರುತ್ತಿದ್ದಾಗ... ಕೇವಲ ೧೫ ಮೈಲುಗಳ ದೂರದಲ್ಲಿ ಇನ್ನೊಂದು ಹಡಗು ಮೌನವಾಗಿ ನಿಂತಿತ್ತು! ಆ ಹಡಗಿನ ಕ್ಯಾಪ್ಟನ್ ಟೈಟಾನಿಕ್‌ನಿಂದ ಹಾರುತ್ತಿದ್ದ ಅಪಾಯದ ಸಿಗ್ನಲ್‌ಗಳನ್ನು ಕಣ್ಣಾರೆ ನೋಡುತ್ತಿದ್ದರೂ ಸುಮ್ಮನಿದ್ದ. ಕೇವಲ ಮೂರು ಪದಗಳ ಒಂದು ಕೋಪದ ಮೆಸೇಜ್ ಮತ್ತು ಮನುಷ್ಯನ ಅಹಂಕಾರ ಹೇಗೆ ಇತಿಹಾಸದ ಅತಿ ದೊಡ್ಡ ದುರಂತಕ್ಕೆ ಕಾರಣವಾಯಿತು? 'ಮುಗಿಯದ ಕಥೆಗಳು' ಸರಣಿಯ ಈ ಸಂಚಿಕೆಯಲ್ಲಿ ಅಟ್ಲಾಂಟಿಕ್ ಸಾಗರದ ಆ ಕತ್ತಲ ರಹಸ್ಯವನ್ನು ಭೇದಿಸೋಣ.

6:15

ಮಂಜರಾಬಾದ್ ಕೋಟೆಯ ಕತ್ತಲ ಸುರಂಗಗಳನ್ನು ಶಾಶ್ವತವಾಗಿ ಮುಚ್ಚಿದ್ದೇಕೆ? | Manjarabad Fort Mystery | ಮುಗಿಯದ ಕಥೆಗಳು

100K views · 1mo ago · 6:15

ಸಕಲೇಶಪುರದ ಹಸಿರಿನ ಕೆಳಗೆ ಅಡಗಿರುವ ಆ ಕರಾಳ ಚಕ್ರವ್ಯೂಹದ ರಹಸ್ಯವೇನು? 1792ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ಮಂಜರಾಬಾದ್ ಕೋಟೆಯ ಕೆಳಗೆ ನಿಜಕ್ಕೂ ೧೩೦ ಕಿ.ಮೀ ಉದ್ದದ ಸುರಂಗಗಳಿವೆಯೇ? ಆ ಬತ್ತದ ಬಾವಿಯ ರಹಸ್ಯವೇನು? ದಶಕಗಳ ಹಿಂದೆ ಈ ಕತ್ತಲ ಕೋಣೆಗೆ ಹೋದವರು ವಾಪಸ್ ಬರಲಿಲ್ಲವೇಕೆ? ಮತ್ತು ಭಾರತೀಯ ಪುರಾತತ್ವ ಇಲಾಖೆ (ASI) ಈ ದ್ವಾರಗಳನ್ನು ಶಾಶ್ವತವಾಗಿ ಮುಚ್ಚಿದ್ದು ಯಾಕೆ? 'ಮುಗಿಯದ ಕಥೆಗಳು' ಸರಣಿಯ ಈ ಸಂಚಿಕೆಯಲ್ಲಿ ಮಲೆನಾಡಿನ ಗರ್ಭದಲ್ಲಿ ಹುದುಗಿರುವ ಈ ಕತ್ತಲನ್ನು ಭೇದಿಸೋಣ.

9:39

11 ಜನರ ಬಲಿ ಪಡೆದ "ಪಶ್ಚಿಮ ಘಟ್ಟಗಳ Bermuda Triangle!" 💀 | ಅರಮನೆ ಗದ್ದೆಯ Mystery! | ಮುಗಿಯದ ಕಥೆಗಳು

151K views · 1mo ago · 9:39

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ 'ಅರಮನೆ ಗದ್ದೆ'ಯಲ್ಲಿ ನಿಜಕ್ಕೂ ಆಗಿದ್ದೇನು? ಇದು ಕೇವಲ ದೆವ್ವದ ಕಾಡೋ? ಅಥವಾ ಮನುಷ್ಯನ ಕ್ರೌರ್ಯದ ಅಡ್ಡೆಯೋ? Welcome back to RJ Thrishool Gowda! In this deep-dive documentary, we explore the chilling reality of Aramane Gadde (Aramane Gudda) in the Shiradi Ghats—a deadly trap locals call the "Bermuda Triangle of the Western Ghats."

6:51

ಉಪಗ್ರಹ ಕದ್ದ ಮಲೆನಾಡಿನ ಜಮೀನು! ಕಸ್ತೂರಿ ರಂಗನ್ ವರದಿಯ ಸತ್ಯ | Kasturirangan Report Exposed | ಮುಗಿಯದ ಕಥೆಗಳು

6.6K views · 1mo ago · 6:51

ರೂಮಿನಲ್ಲಿ ಕೂತು ಮಾಡಿದ 'ಡೆಸ್ಕ್‌ಟಾಪ್ ಸಮೀಕ್ಷೆ', ಮಲೆನಾಡು ಮತ್ತು ಕರಾವಳಿಯ ಲಕ್ಷಾಂತರ ರೈತರ ಬದುಕನ್ನೇ ಕಿತ್ತುಕೊಳ್ಳುತ್ತಿದೆಯಾ? ಬಾಹ್ಯಾಕಾಶದಲ್ಲಿ ಹಾರುವ ನಿರ್ಜೀವ ಉಪಗ್ರಹಗಳು ನಮ್ಮ ಅಡಿಕೆ, ಕಾಫಿ, ಮತ್ತು ಕಾಳುಮೆಣಸಿನ ತೋಟಗಳನ್ನು 'ಅರಣ್ಯ' ಎಂದು ತಪ್ಪಾಗಿ ಗ್ರಹಿಸಿ ರೈತರ ಕೊರಳಿಗೆ ಕುಣಿಕೆ ಬಿಗಿಯುತ್ತಿವೆ.

5:02

ಬರ್ಮುಡಾ ಟ್ರಯಾಂಗಲ್ ಜಗತ್ತಿನ ಅತಿ ದೊಡ್ಡ ಸುಳ್ಳಾ? 🤯 | The Dark Truth of Bermuda Triangle | ಮುಗಿಯದ ಕಥೆಗಳು

31K views · 1mo ago · 5:02

ಬರ್ಮುಡಾ ಟ್ರಯಾಂಗಲ್‌ನ ಹಿಂದೆ ಅಡಗಿರುವ ಅಸಲಿ ಸತ್ಯವೇನು? ಕಣ್ಮರೆಯಾದ ಆ 50 ಹಡಗುಗಳು ಮತ್ತು 20 ವಿಮಾನಗಳು ಎಲ್ಲಿ ಹೋದವು? ಕಳೆದ ನೂರು ವರ್ಷಗಳಿಂದ ಜನರನ್ನು ಕಾಡುತ್ತಿರುವ ಜಗತ್ತಿನ ಅತಿ ದೊಡ್ಡ ರಹಸ್ಯ - ದಿ ಬರ್ಮುಡಾ ಟ್ರಯಾಂಗಲ್ (The Bermuda Triangle). ಅನ್ಯಗ್ರಹ ಜೀವಿಗಳ ಕೈವಾಡ (Aliens), ಟೈಮ್ ಟ್ರಾವೆಲ್ ಪೋರ್ಟಲ್ (Time Travel), ಸಮುದ್ರದಾಳದ ರಾಕ್ಷಸರು... ಹೀಗೆ ನೂರಾರು ಕಥೆಗಳನ್ನು ನೀವು ಕೇಳಿರಬಹುದು. ಆದರೆ, ವಾಸ್ತವ ಏನು ಗೊತ್ತಾ?

7:10

Part: 02 - ಅಮೆಜಾನ್ ಕಾಡಿನ ಅಸಲಿ ಸತ್ಯ | Lungs of the Earth Myth Busted! | ಮುಗಿಯದ ಕಥೆಗಳು

168K views · 1mo ago · 7:10

ಕಳೆದ 500 ವರ್ಷಗಳಿಂದ ಸಾವಿರಾರು ಜನರನ್ನು ಬಲಿಪಡೆದ ಚಿನ್ನದ ನಗರ 'ಎಲ್ ಡೊರಾಡೊ' (El Dorado) ಅಸಲಿಗೆ ಒಂದು ಊರೇ ಅಲ್ಲ! ಜೊತೆಗೆ ಅಮೆಜಾನ್ ಕಾಡು ಕೇವಲ ನರಭಕ್ಷಕರು ಮತ್ತು ದೈತ್ಯ ಹಾವುಗಳ ತಾಣ ಮಾತ್ರವಲ್ಲ, ಇದು 10 ಅಡಿ ಅಗಲದ ದೈತ್ಯ ತಾವರೆಗಳು, ಮಣ್ಣು ತಿನ್ನುವ ಗಿಳಿಗಳು ಮತ್ತು ರಾತ್ರಿ ಹೊಳೆಯುವ ಅಣಬೆಗಳಿರುವ ಮಾಂತ್ರಿಕ ಜಗತ್ತು. ಆದರೆ ಆಧುನಿಕ ವಿಜ್ಞಾನ ಬಿಚ್ಚಿಟ್ಟಿರುವ ಶಾಕಿಂಗ್ ಸತ್ಯ ಏನಂದ್ರೆ, ನಾವು ಉಸಿರಾಡುವ ಗಾಳಿಗೂ ಅಮೆಜಾನ್ ಕಾಡಿಗೂ ಯಾವುದೇ ಸಂಬಂಧವಿಲ್ಲ!

7:15

ಅಮೆಜಾನ್ ಕಾಡಿನ ಕರಾಳ ರಹಸ್ಯಗಳು: ನರಭಕ್ಷಕರು ಮತ್ತು ಕುದಿಯುವ ನದಿ! 💀 | Amazon Dark Mysteries | ಮುಗಿಯದ ಕಥೆಗಳು

130K views · 1mo ago · 7:15

ಅಮೆಜಾನ್ ಕಾಡಿನ ಕರಾಳ ರಹಸ್ಯಗಳು ಒಂದೇ ವಿಡಿಯೋದಲ್ಲಿ! ಕಳೆದುಹೋದ 'El Dorado' ನಗರದಿಂದ ಹಿಡಿದು, ದಾರಿ ತಪ್ಪಿದವರನ್ನು ಬೇಟೆಯಾಡುವ ನರಭಕ್ಷಕರು ಮತ್ತು 100 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕುದಿಯುವ ನದಿಯ ರೋಚಕ ಕಥೆ. ಅಮೆಜಾನ್ ಕೇವಲ ಕಾಡಲ್ಲ... ಇದೊಂದು ಸುಂದರ ನರಕ! ವಿಜ್ಞಾನಿಗಳು ಲೈಡಾರ್ (LiDAR) ಲೇಸರ್ ಬಳಸಿ ಸ್ಕ್ಯಾನ್ ಮಾಡಿದಾಗ ಸಿಕ್ಕ ಆ ಬೃಹತ್ ಪಿರಮಿಡ್‌ಗಳ ರಹಸ್ಯವೇನು? ಜ್ವಾಲಾಮುಖಿಯೇ ಇಲ್ಲದ ಜಾಗದಲ್ಲಿ ಶನಾಯ್-ಟಿಂಪಿಶ್ಕಾ (Shanay-Timpishka) ನದಿ ಕುದಿಯುತ್ತಿರುವುದು ಹೇಗೆ? 50 ಅಡಿ ಉದ್ದದ ದೈತ್ಯ ಜಲ-ಸರ್ಪ ಯಾಕುಮಾಮಾ (Yacumama) ನಿಜಕ್ಕೂ ಇದೆಯಾ?

59:34

Knees, Shoulders & Corporate Life with Dr Pradyumna R | On The RawX | RJ Thrishool Gowda

4.9K views · 2mo ago · 59:34

Guest: Dr Pradyumna

Are you experiencing knee pain or shoulder stiffness from sitting at a desk all day? In this video, Dr. Pradyumna R (Orthopaedic & Sports Medicine Specialist) explains how the modern corporate lifestyle affects our bodies and shares expert tips to protect your joints.

Topics: Signature · Welcome · Journey of Dr. Pradyumna R · Practice in Germany and South Korea · Childhood memories of Dr. Pradyumna R · Malnad days

3:55

ಸಿಗಿರಿಯಾ: ವಿಸ್ಮಯಕಾರಿ ಇತಿಹಾಸ ಮತ್ತು ಕಲ್ಲಿನ ಮೇಲಿನ ಸ್ವರ್ಗ । Sri Lanka Tour: Episode - 01

663 views · 4mo ago · 3:55

ನಮಸ್ಕಾರ ಫ್ರೆಂಡ್ಸ್! Welcome to very first episode of our Sri Lanka series. In this video, Pragathi and I take on the ultimate challenge – climbing the ancient Sigiriya Rock Fortress in extreme heat! ವಿಮಾನದಿಂದ ಇಳಿದ ತಕ್ಷಣ ನಮ್ಮ ಜರ್ನಿ ಶುರುವಾಗಿದ್ದು ಪ್ರಪಂಚದ 8ನೇ ಅದ್ಭುತ ಅಂತಲೇ ಫೇಮಸ್ ಆಗಿರೋ ಶ್ರೀಲಂಕಾದ 'ಸಿಗಿರಿಯಾ' (Sigiriya) ಕಡೆಗೆ. 660 ಅಡಿ ಎತ್ತರದ ಈ ಬೃಹತ್ ಬಂಡೆಯನ್ನು ಹತ್ತಲು ಬರೋಬ್ಬರಿ 1200 ಮೆಟ್ಟಿಲುಗಳನ್ನು ಏರಬೇಕು! ಕಿರಿದಾದ ಕಬ್ಬಿಣದ ಮೆಟ್ಟಿಲುಗಳು, ಸುಡುವ ಬಿಸಿಲು, ಪಕ್ಕದಲ್ಲೇ ಪಾತಾಳ...

3:23

ದೇವರಿಗೇ ಬೈಯ್ಯೋ ಹಬ್ಬ! 🤯 | The Unique Festival of Kodagu | Kunde Habba Story

3.7K views · 5mo ago · 3:23

ಹಬ್ಬ ಅಂದ್ರೆ ಪೂಜೆ, ಪುರಸ್ಕಾರ ಅಂತ ನಾವೆಲ್ಲ ಅನ್ಕೊಂಡಿದ್ರೆ, ಕೊಡಗಿನಲ್ಲಿ ಒಂದು ಹಬ್ಬ ಇದೆ, ಅಲ್ಲಿ ದೇವರಿಗೇ ಹಿಗ್ಗಾಮುಗ್ಗಾ ಬೈತಾರೆ! ಹೌದು, ಇದು ಪಕ್ಕಾ ರಿಯಲ್. ಈ ಹಬ್ಬದ ಹೆಸರೇ ಕುಂಡೆ ಹಬ್ಬ ಅಥವಾ ಬೇಡು ಹಬ್ಬ. ತಲೆಗೊಂದು ವಿಚಿತ್ರ ವೇಷ, ಬಾಯಲ್ಲಿ ಬೈಗುಳ, ಜೊತೆಗೆ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್! ಅಷ್ಟಕ್ಕೂ ಇವರು ದೇವರಿಗೆ ಯಾಕೆ ಹಿಗ್ಗಾಮುಗ್ಗಾ ಬೈತಾರೆ? ದುಡ್ಡು ಕೊಡ್ಲಿಲ್ಲ ಅಂದ್ರೆ ಏನಾಗುತ್ತೆ? ಇದರ ಹಿಂದಿರೋ 800 ವರ್ಷಗಳ ಹಳೆಯ ಸ್ಟೋರಿ ಏನು ಅಂತ ಈ ವಿಡಿಯೋದಲ್ಲಿ ಮಸ್ತ್ ಆಗಿ ಹೇಳಿದೀನಿ. ವಿಡಿಯೋ ಫುಲ್ ನೋಡಿ.

Showing the 15 most recent episodes. Everything plays right here on Pod Atlas.

Have thoughts about RJ Thrishool Gowda? Share them with other listeners.

Discuss this podcast

More History podcasts

← Back to all podcasts